Grid View
List View
 • pratimamoha 1w

  ಜನ ಸಾಮಾನ್ಯರು
  ಅಮೇಧ್ಯವನ್ನು ಹೊಕ್ಕುಬರುವ ನೊಣಗಳ ತರ
  ಈ ನೊಣಗಳೆ
  ಈಗಿನ‌ ಭಾರತದ ದುರಂತಕ್ಕೆ ಕಾರಣ
  ಅರಿವುಳ್ಳವರು ಅಮೇಧ್ಯದ ನೊಣಗಳಂತೆ ಇರಬಾರದು
  ಅದು ಸರಸ್ವತೀದ್ರೋಹ

  ________________
  ಡಾ ಕೆ ಪಿ ನಟರಾಜ
  6. 5. 2021
  ©pratimamoha

 • pratimamoha 1w

  ಕ್ಷಮೆ , ಶಿಕ್ಷೆ ಗಳ ಜಿಜ್ಙಾಸೆ
  ______________

  #ಆರ್ಗೊ_ಬಲಿ_ನಿನ್ನ_ಬೆರಳ್
  #ಬಲಿಯಕ್ಕೆ_ಆ_ಪಾಪಿಯ_ಕೊರಳ್

  ಕತ್ತರಿಸಿ ನೆಲದ ಮೇಲೆ ಬಿದ್ದಿದ್ದ ಏಕಲವ್ಯನ
  ಹೆಬ್ಬೆರಳು ನೋಡಿ ಅವನ‌ ತಾಯಿ ಸಂಕಟದಿಂದ ಕ್ರೋಧ ದಿಂದ ಕೊಟ್ಟ ಶಾಪ ಇದು

  ಕುವೆಂಪು ತಮ್ಮ ' ಬೆರಳ್ಗೆ ಕೊರಳ್' ನಲ್ಲಿ ವೇದವ್ಯಾಸರ ಈ ಮಾತನ್ನು endorse ಮಾಡುತ್ತಾರೆ

  ಈ ಶಾಪ ದ ಪರಿಣಾಮ ಹೇಗಿತ್ತೆಂದರೆ ಗುರು ದ್ರೋಣರ ತಲೆಯನ್ನು ಧೃಷ್ಟದ್ಯುಮ್ನ ಕುರುಕ್ಷೇತ್ರ ದ ರಣಾಂಗಣದಲ್ಲಿ ಜುಟ್ಟು ಹಿಡಿದು ಕತ್ತರಿಸಿ ಬಿಸಾಕುತ್ತಾನೆ..
  ಇದು ವೇದವ್ಯಾಸರೇ ಲೋಕಕ್ಕೆ ಕಾಣಿಸಿದ ಅಥವಾ ಕೊಟ್ಟ ಎಚ್ಚರ..

  ಅನ್ಯಾಯ ಮಾಡಿದವನು ಅನುಭವಿಸಲೇಬೇಕು...

  ಪಾಪಿಗಳನ್ನು ಕ್ಷಮಿಸಲು ಮುಂದೆ ಬಂದ ಮಹಾ ಮಹಿಮರಿದ್ದಾರೆ .. ಗ್ರಹಾಂಸ್ಟೇನ್ಸ್ ಅವರ ಪತ್ನಿ ಅಂತಹವರು ಓತನ್ನ ಮಕ್ಕಳು ಮತ್ತು ಗಂಡನನ್ನು ಸುಟ್ಟು ಕೊಂದ ಪಾಪಿಗಳನ್ನು ಅವರು ಕ್ಷಮಿಸಿದರು ..

  ಸೋನಿಯಾ ಗಾಂಧಿ ಮತ್ತೆ ರಾಹುಲ್ ಗಾಂಧಿಯವರು ರಾಜೀವ್ ಗಾಂಧಿಯವರ ಕೊಲೆಗಡುಕರನ್ನು ಕ್ಷಮಿಸುವಂತೆ ಹೇಳಿಕೆ ಕೊಟ್ಟರು ಅದು ಆ ವ್ಯಕ್ತಿಗಳ ದೊಡ್ಡತನ‌ ,

  ಅದರೆ ಲೋಕದ ನಿಯತಿ‌ (ಅಥವಾ ಋತ ಅಂತರೆ ಕುವೆಂಪು ) ಅದನ್ನು ಒಪ್ಪಲ್ಲ.. ಅವರನ್ನು ಶಿಕ್ಷಿಸಿ ಅಂತಲೇ ಅನ್ನುತ್ತದೆ ‌..

  ಕೋರ್ಟ್ಗಳು ಶಿಕ್ಷಿಸಬೇಕು ..

  ಕೋರ್ಟಿನಿಂದ ನುಗುಚಿಕೊಂಡ ಅಂದರೆ ಯಾರಾದರೂ ಬಡಿದಾದರೂ ಮುಗಿಸಿಬಿಡಬೇಕು..

  ಇಲ್ದಿದ್ರೆ ಪಾಪ ಪ್ರಜ್ಙೆಯಾದರೂ ಕೊಲ್ಲಬೇಕು ..

  ಇಲ್ದಿದ್ರೆ ಇಲ್ಲಿ ಪಾಪವೇ ಆಳುವಂತಾಗುತ್ತದೆ..

  ___________
  ಡಾ ಕೆ ಪಿ ನಟರಾಜ
  5. 5. 2021
  ©pratimamoha

 • pratimamoha 2w

  By unknown writer

  Read More

  RESIGN MODI

 • pratimamoha 2w

  ಪದ್ಯವೆ..

  ಪದ್ಯವೆ
  ನೆಟ್ಟಗೆ ಬರೆಯಲಾಗಲಿಲ್ಲ‌ ನಿನ್ನ
  ಮತ್ತೊಮ್ಮೆ ಬರೆಯುವೆ

  ________________
  ಕೆ ಪಿ ನಟರಾಜ
  2. 4. 2021
  ©pratimamoha

 • pratimamoha 2w

  By unknown writer

  Read More

  #happiness ಅಂದ್ರೆ,

  "ಸಿದ್ರಾಮಯ್ಯನ್ನ ನಾವು ನಿದ್ದೆರಾಮಯ್ಯ ಅಂತ ಕರೀತಿದ್ವಿ, ಆದರೆ ಅವರ ಆಡಳಿತದಲ್ಲಿ ನಾವು ಚೆನ್ನಾಗಿದ್ವಿ, ಬೇಕೇ ಬೇಕಂತಾ ಬಯಸೀ ಬಯಸೀ ಬಿಜೆಪಿಗೆ ಓಟಾಕಿ ಈಗ ಅನುಭವಿಸ್ತಿದೀವಿ"
  ಅಂತ ಬಿಜೆಪಿಗೆ ಓಟಾಕಿದ್ದವರು ಹೇಳ್ತಾರಲ್ಲಾ,
  ಅಂತವ್ರ ಮಾತು ಕೇಳೋದ್ರಲ್ಲಿದೆ ಕಣ್ರೀ #ಹ್ಯಾಪಿನೆಸ್..

  ಶಿವಣ್ಣ

 • pratimamoha 2w

  ಅನ್ನಬಾಗ್ಯ ವನ್ನು ಟೀಕಿಸುತ್ತಿದ್ದ ಕೆಲವು ಬುದ್ದಿಜೀವಿಗಳ ಆತ್ಮ ಈಗ ಸಮಾಧಾನದ ನಿಟ್ಟುಸಿರುಬಿಡುತ್ತಿರಬಹುದು

  ವಿತರಿಸಲಾಗುತ್ತಿದ್ದ ಅಕ್ಕಿ , ತಲಾ ಏಳು ಕೆಜಿ ಯಿಂದ ‌ಎರಡು ಕೆಜಿಗೆ ಇಳಿದಿದೆ ,
  ಬಡಬಗ್ಗರು ಸಸ್ತಾ ಬೆಲೆಗೆ ಹೊಟ್ಟೆ ತುಂಬ ಉಣ್ಣುತ್ತಿದ್ದ ಇಂದಿರಾ ಕ್ಯಾಂಟೀನ್ ಗಳನ್ನು ಸಹ ಮುಚ್ಚಲಾಗುತ್ತಿದೆ ಅನ್ನಲಾಗುತ್ತಿದೆ ..

  ಬಿಜೆಪಿ ಗೆ ಜೆಡಿಎಸ್ ಗೆ ಓಟು ಒತ್ತಿದ ಅನ್ನ ಭಾಗ್ಯದ ಈ ಫಲಾನುಭವಿಗಳು ತಡವಾದರೂ ಅದರ ಪಲ ಉಣ್ಣುತ್ತಿದ್ದಾರೆ .ಈ ಬಡವರ , ಅಲ್ಲಲ್ಲ ಕಳ್ಳ ಭಡವರ ಗಾಂಚಾಲಿಯ ಬೆಂಕಿಗೆ ನೀರು ಸುರಿಯಲಾಗಿದೆ . ಅವು ಮತ್ತೆ ತಿಕ‌ಮಕ ಕೆರಕೊಂಡು ಉಳ್ಳ 'ಪುಣ್ಯಾತ್ಮರ' ಮುಂದೆ ಬಂದು ನಿಲ್ಲಲಿವೆ

  ಈಗ ನಿಜವಾದ ಅಚ್ಚೇ ದಿನ್ ಎಲ್ಲ ರ ಮನೆಯ ಬಾಗಿಲ ಬಳಿ ಬಂದು ಒಂದು ಹೆಜ್ಜೆ ಒಳಗಿಟ್ಟಿದೆ .

  ಅದೂ ಕೋವಿಡ್ , ಸಮುದಾಯಗಳೊಳಗೆ ನುಗ್ಗಿ ಜನರನ್ನು ಬಲಿತೆಗೆದುಕೊಳ್ಲುವಾಗ , ವಿಸ್ವ ಗುರು ಸನ್ಮಾನ್ಯ ಮೋದಿ ನೇತೃತ್ವದ ಬಿಜೆಪಿಯು ವೇತನ ರಹಿತ ಲಾಕ್ಡೌನ್ ನ 'ವಿಶ್ರಾಂತಿ' ಯ ಸಮಯದಲ್ಲಿ ಕೊಟ್ಟ ಉಡಗ್ರೆ ಇವು

  ಅದೇನೊ ಹೇಳುತ್ರಾರಲ್ಲ , "ಸುಕ ಬಂದರೆ ಹಿಂಗೇ .. ಒಟ್ಟೊಟ್ಟಿಗೇ ನುಗ್ಗಿಬರುತ್ತದೆ '' ಅಂತ ...ಹಂಗಾಗಿದೆ ನಮಗೆ

  ನಾವು ತನುಮನದನ ಸಮರ್ಪಿಸಿ ಆಯ್ಕೆ ಮಾಡಿದ ಸನಾತನ ದರ್ಮ ರಕ್ಸಕರು , ಕ್ರೂರ ರಕ್ಕಸ ಗಾಂಧಿ ಮಾತ್ಮ ನನ್ನು ಕೊಂದ ದೇಸ ಬಕ್ತರು ನಮಗೆ ಸರ್ವಾಂಗೀಣ ಸುಕವಾಗುವಂತೆ ಹಿಂಗೆ ಚನ್ನಾಗಿ ( ರಾಜ್ಯಬಾರ )ಮಾಡುತ್ತಿದ್ದಾರೆ

  __________
  ಕೆ ಪಿ ನಟರಾಜ
  28. 4. 2021_
  ©pratimamoha

 • pratimamoha 2w

  ನಾನು ಎಲ್ಲ ಹಿರಿಯರ ಹಾದಿಗ
  _______________

  ಬುದ್ದ ಗುರು ಹುಟ್ಟಿದ್ದು
  ಹಲವು ಜಾತಿ ಮತ್ತು ವರ್ಣಗಳಿದ್ದ ನಮ್ಮ ನಡುವೆ
  ಉಳಿದದ್ದೂ ನಮ್ಮಲ್ಲಿ ಒಬ್ಬನಾಗಿ

  ಅವನು ಬೌದ್ಧನಲ್ಲ ಕಾಣಿರೋ

  ಮಹಾವೀರ ಹುಟ್ಟಿದ್ದು
  ಹಲವು ಜಾತಿ ಮತ್ತು ವರ್ಣಗಳಿದ್ದ ನಮ್ಮ ನಡುವೆ
  ಉಳಿದದ್ದೂ ನಮ್ಮಲ್ಲಿ ಒಬ್ಬನಾಗಿ

  ಅವನು ಜೈನನಲ್ಲ ಕಾಣಿರೋ

  ಬಸವಣ್ಣ ಹುಟ್ಟಿದ್ದು
  ಹಲವು ಜಾತಿ ಮತ್ತು ವರ್ಣಗಳಿದ್ದ ನಮ್ಮ ನಡುವೆ .
  ಉಳಿದದ್ದೂ ನಮ್ಮಲ್ಲಿ ಒಬ್ಬನಾಗಿ

  ಅವನು ಶೈವನಲ್ಲ ಕಾಣಿರೋ

  ನಾನಕ್ ಹುಟ್ಟಿದ್ದು
  ಹಲವು ಜಾತಿ ಮತ್ತು ವರ್ಣಗಳಿದ್ದ ನಮ್ಮ ನಡುವೆ
  ಉಳಿದದ್ದೂ ನಮ್ಮಲ್ಲಿ ಒಬ್ಬನಾಗಿ

  ಅವನು ಸಿಕ್ಕನಲ್ಲ ಕಾಣಿರೋ

  ಗಾಂಧಿ ಹುಟ್ಟಿದ್ದು
  ಹಲವು ಜಾತಿ ಮತ್ತು ವರ್ಣಗಳಿದ್ದ ನಮ್ಮ ನಡುವೆ
  ಉಳಿದದ್ದೂ ನಮ್ಮಲ್ಲಿ ಒಬ್ಬರಾಗಿ

  ಗಾಂಧಿ ಅನ್ಯರಲ್ಲ ಕಾಣಿರೋ

  ಕುವೆಂಪು ಹುಟ್ಟಿದ್ದು
  ಹಲವು ಜಾತಿ ಮತ್ತು ವರ್ಣಗಳಿದ್ದ ನಮ್ಮ ನಡುವೆ
  ಉಳಿದದ್ದೂ ನಮ್ಮಲ್ಲಿ ಒಬ್ಬರಾಗಿ

  ಕುವೆಂಪು ವಕ್ಕಲಿಗನಲ್ಲ ಕಾಣಿರೋ

  ಲೋಹಿಯಾ ಅಂಬೇಡ್ಕರ್ ಪೆರಿಯಾರ್ ಎಲ್ಲರೂ ಹುಟ್ಟಿದ್ದು
  ಇಲ್ಲೆ ನಮ್ಮ ನಡುವೆ
  ಉಳಿದದ್ದೂ ನಮ್ಮಲ್ಲಿ ಒಬ್ಬರಾಗಿ

  ಅಯ್ಯೋ ನಮಗವರು ಬೇಡವಾದರೇನ್ರೋ

  ಜನ ಅಲ್ಲಲ್ಲೆ ಅಲ್ಲಲ್ಲೆ ಇವರ ಸುತ್ತ ಗುಡಿ ಕಟ್ಟಿದರು
  ಬೇರೆ ಬೇರೆ ಹೆಸರಿಟ್ಟು‌ ಕರೆದರು ,
  ಹೊರಹಾಕಿದರು , ಹೊರಹೋದರು

  ನನಗೋ ಅವರೆಲ್ಲರೂ
  ನನ್ನವರು ,
  ನಾನು ಅವರ ದಾರಿಗ

  ಇವರಷ್ಟೇ ಏಕೆ ಜೀಸಸ್ ಕ್ರೈಸ್ಟ್ ಮತ್ತು ಪ್ರವಾದಿ ಪೈಗಂಬರ್ ಹುಟ್ಟಿದ್ದೂ ನಮ್ಮ ನಡುವೆ
  ಉಳಿದದ್ದೂ ನಮ್ಮೊಳಗಿನವರಾಗಿ

  ಇದೊ
  ನಾನು ಇವರ ದಾರಿಗ ಕೂಡಾ ....

  ____________
  ಡಾ ಕೆ ಪಿ ನಟರಾಜ
  28. 4. 2021
  ©pratimamoha

 • pratimamoha 2w

  ಸಾಯ್ತ್ಯ ಪರ್ಸತ್ತೆ ಬ್ಯಾಡ ಅಲ್ವ ?
  ಅದು ,ಮನು ಬಳಿಗಾರ್ ತರ ರಿಟೈರ್ಡ್ ಕ್ಳರ್ಕ್ ಗಳು ಮನೆಗೋಗ್ದೆ ಮಜಾ ಮಾಡೋ ಜಾಗ ಆಗೋದಾದ್ರೆ ಅದ್ಯಾಕೆ ..?

  _________
  ಡಾ ಕೆ ಪಿ ನಟರಾಜ
  26. 4. 2021
  ©pratimamoha

 • pratimamoha 2w

  ಯೋ ದೇಶ ಭಕ್ತ ಬಿಜೆಪಿಗಳ ,
  ಹದಿನೈದು ದಿನ ಬಂದ್ ಆದರೆ ನಿರ್ಗತಿಕರ ಹೊಟ್ಟೆ ಬಟ್ಟೆ ಕತೆ ಹೆಂಗ್ರಪ್ಪ ?
  ಬಿಪಿಎಲ್ ಕುಟುಂಬಗಳಿಗೆ ತಲಾ ೫೦೦೦/- ರೂಪಾಯ್ ದುಡ್ ಕೊಡ್ರಯ್ಯ

  _______
  ಕೆ ಪಿ ನಟರಾಜ
  26. 4. 2021
  ©pratimamoha

 • pratimamoha 3w

  ನಮ್ಮ ಮತ, ನಮ್ಮಭಿಮತ
  __________________

  "ಇವನಾರವ ? ಇವನಾರವ ?"
  ಎನ್ನುವವ ರಾಜಕೀಯ ಮಾಡಲು ಅಯೋಗ್ಯ

  "ಇವ ನಮ್ಮವ , ಇವ ನಮ್ಮವ "
  ಎನ್ನುವವ ಮಾತ್ರ ರಾಜಕೀಯಕ್ಕಾಹ್ವಾನಯೋಗ್ಯ

  ಇದನ್ನರಿತ ಪ್ರಜಾ , ನಾವು ನೀವಾದಲ್ಲಿ ಕುಶಲಿ
  ಇದನ್ನರಿಯದಿದ್ದರೆ ಕಾದಿದೆ ನಮ್ಮ ನಿಮ್ಮ ಬಲಿ

  ಮತವೆಂಬ ನಮ್ಮಭಿಮತವು
  "ಇವನಾರವ ?ಇವನಾರವ ? ‌‌‌ಎನ್ನುವವನಿಗಲ್ಲ

  ತಿಳಿದಿರಲಿ ,"ಇವ ನಮ್ಮವ , ಇವ ನಮ್ಮವ ''
  ಎನ್ನುವವನಿಗಿರಲಿ

  ಗೊತ್ತಾಗಲಿ, ನಮ್ಮ ಮತ : ತಾನು - ಅನ್ಯ
  ಎಂದು ಬೇರಿಂಗಡ ಮಾಡದವನಿಗಿರಲಿ

  ನಮ್ಮ ಮತ , ನಮ್ಮ ಜೊತೆ
  ಸದಾ ಭದ್ರವಾಗಿರಲಿ , ಮಾರಿಕೊಳ್ಳದಿರಲಿ‌

  __________
  ಡಾ ಕೆ ಪಿ ನಟರಾಜ
  20. 4. 2021
  ©pratimamoha