• manjunatharadhya 12w

    ಕಾವೇರಿಯ ಒಡಲಲ್ಲಿರುವಾಗ
    ಚಿನ್ನದ ನಾಡಲ್ಲಿ ಹುಟ್ಟಿರುವಾಗ
    ಶ್ರೀಗಂಧದ ತವರಲ್ಲಿ ನೆಲೆಸಿರುವಾಗ
    ಎತ್ತ ನೋಡುವೆ ಮಾನವ ನಿನ್ನ ಸುತ್ತಲೇ ಸ್ವರ್ಗವಿರುವಾಗ..

    ಓದಲು ಕುವೆಂಪು ಮಾಸ್ತಿ ಕಾರಂತರ ಪದಗಳಿರುವಾಗ
    ನೋಡಲು ರಾಜ್ ವಿಷ್ಣು ಅಂಬಿ ಅಪ್ಪು ಶಂಕ್ರಣ್ಣನ ಚಿತ್ರಗಳಿರುವಾಗ
    ಸಮಯ ಕಳೆಯಲು ಪಶ್ಚಿಮ ಘಟ್ಟಗಳ ಜಲಪಾತಗಳಿರುವಾಗ
    ಎತ್ತ ನೋಡುವೆ ಮಾನವ ನಿನ್ನ ಸುತ್ತಲೇ ಸ್ವರ್ಗವಿರುವಾಗ..

    ಕಾತರಿಸಬೇಕು ನೀನು ಕನ್ನಡ ಮಾತನಾಡಲು
    ಕನ್ನಡಿಗರ ಸಂಗಡವಿರಲು ಕನ್ನಡತನವ ಬೆಳೆಸಿಕೊಳ್ಳಲು
    ಕರುನಾಡ ಋಣ ತೀರಿಸಲು ಕನ್ನಡಾಂಭೆಯಲ್ಲಿ ಮುಕ್ತಿಹೊಂದಲು
    ಮತ್ತೆತ್ತ ನೋಡುವೆ ಮಾನವ ನಿನ್ನ ಸುತ್ತಲೇ ಸ್ವರ್ಗವಿರುವಾಗ..
    ©manjunatharadhya